ಸೋಮವಾರ, ಜುಲೈ 2, 2012

ನನ್ನ ಮನದಾಳದ ಚಿತ್ಕಾರ


ನನ್ನ ಮನಸಿನ ನೂರಾರು ಆಸೆಗಳಿಗೆ
ರೆಕ್ಕೆ ತಂದವಳು ನೀನು ♥
ನನ್ನ ಕನಸಿನ ಕೋಟೆಯ ಬಾಗಿಲ ತೆರೆದು
ಪೀರ್ತಿಯ ಸ್ಪರ್ಶ ನೀಡಿದವಳು ನೀನು ♥
ನನ್ನ ಸಾಗರದಂತಹ ಹೃದಯಕ್ಕೆ ಸ್ನೇಹದ 
ಸೆಳೆತ ತಂದವಳು ನೀನು .♥
ನಿನ್ನ ಈ ಮೌನವ ಸಹಿಸಿಯೂ ಪ್ರೀತಿಯ ಅರಸುತ್ತ
ಬದುಕ ಸಾಗಿಸುವ ಅಲೆಮಾರಿ ನಾನು ♥

ನನ್ನ ಕಣ್ಣಿನಲ್ಲಿ ಒಮ್ಮೆ ನೋಡು ಬಾ ಗೆಳತಿ
ನಿನ್ನ ಪ್ರೀತಿ ಮಾಡುತ್ತಿರುವ ರೀತಿಯ
ನೀ ನೋಡಿದರು ನೋಡಲಾಗದಿರುವ
ಅದೆಷ್ಟೋ ನನ್ನ ಮನಸಿನ ಭಾವನೆಯ ♥
ನನ್ನ ಮನಸಿನ್ನಲ್ಲಿ ಆಗುತ್ತಿರುವ ತಳಮಳವೆಲ್ಲ
ಕನಸೋ ಕಲ್ಪನೆಯೂ ನಾ ಅರಿಯೆ ♥
ಇದೆಲ್ಲ ಏನೇ ಇದ್ದರು ನಾ ನಾಗಬೇಕೆನ್ದಿರುವೆ
ನಿನ್ನೊಲವಿಗೆ ಒಡೆಯ ♥

ಕಣ್ಣಿನ ಹನಿಯಲ್ಲಿ ಹೊರ ಹಾಕಲು
ಸಾಧ್ಯವೇ ಹೃದಯದ ನೋವೆಲ್ಲ♥
ನನ್ನ ಮೊಗವ ನೀನೋಮ್ಮೆ ನೋಡು 
ಅರಿಯುವೆ ನೀ ನನ್ನ ಮನದಾಳದ ಚಿತ್ಕಾರವನ್ನ 
ನಿನ್ನ ಸನಿಹ ಇದ್ದರೆ ನಾ ಕಾಣುವೆ 
ಪ್ರೀತಿಯ ಅರ್ಥವನ್ನೆಲ್ಲ
ನಿನ್ನ ಪ್ರೀತಿಯ ಮಧುರ ಅಲೆಗಳಲ್ಲೇ
ಅಡಗಿದೆ ನನ್ನ ಮೌನದ ಮಾತೆಲ್ಲ♥

ನಿನ್ನದೇ ಬಿಂಬ

ತಿರುಗಿ ಹೋಗುವ ಮುನ್ನ ನನ್ನ ಕಣ್ಣನ್ನು ಒಮ್ಮೆ ನೋಡು
ನನ್ನ ನಯನದಲ್ಲೇ ಕಾಣುವೆ ನಿನ್ನ ನಾ ನೋಡುವ ತವಕ
ಕನಸಂತೆ ನನ್ನ ಬಾಳಲ್ಲಿ ಬಂದವಳು ನೀನು
ಈ ಕನಸ ನನಸ ಮಾಡದೇ ಹೋಗಬೇಕೆನ್ದಿರುವವಳು ನೀನು  :)

ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ನೀನೆ ಆಗಿರುವೆ
ನೀ ಬಂದೆ ಬರುವೆ ಎಂದು ನೂರಾರು ಕನಸ ಕಟ್ಟಿರುವೆ
ಈ ನನ್ನ ಕನಸಿನ ಕೋಟೆಯಲ್ಲೂ ನೀನೆ ಕಾಣುತ್ತಿರುವೆ
ನಿನ್ನ  ಕಾಯುವುದರಲ್ಲೂ ಅದೇನೋ ಸುಖವಿದೆ :)

ನನ್ನ ಬದುಕಿನ ಕನ್ನಡಿಯಲಿ ನಿನ್ನದೇ ಬಿಂಬವಿದೆ ,

ದಯವಿಟ್ಟು ಒಡೆಯದೆ ಹೋಗದಿರು ಈ ನನ್ನ ಒಲವನ್ನ
ಮಿಡಿಯುತಿದೆ ನನ್ನ ಹೃದಯ ನಿನ್ನ ಒಂದು ಆ ಕಣ್ ಸನ್ನೆಗೆ
ನೀ ನನ್ನ ಬಾಳಲ್ಲಿ ಬಂದರು ಬರದೆ ಇದ್ದರು, ಸುಖವಾಗಿರು
ನಿನೆಲ್ಲೇ ಇದ್ದರು, ಇದೊಂದೇ ಪ್ರಾರ್ಥನೆ ಆ ನನ್ನ  ದೇವರಿಗೆ :)

ಶುಕ್ರವಾರ, ಜೂನ್ 15, 2012

ಒಲವಿನ ಬೇಗೆ

ನುಡಿಯುತಿದೆ ನಿನ್ನ ಪ್ರೀತಿಯ ಘಂಟೆ
ನನ್ನ ಹೃದಯದ ಮಂಟಪದಲಿ,
ಹೊಸದೇನೋ ಕೇಳಬಯಸಿದೆ ನನ್ನ ಮನಸ್ಸು
ನಿನ್ನ ನೋಡಿದ ಘಳಿಗೆಯಲಿ .

ನಿನ್ನ ನೋಡಿದ ಕ್ಷಣದಿಂದ
ಪ್ರತಿಯೊಂದು ಹೊಸದೆನಿಸಿದೆ ,
ಈ ನನ್ನ ಮನಸಿನ ಪುಟದಲಿ
ನಿನ್ನ ಹೆಸರೇ ಬರೆಯಬೇಕೆನಿಸಿದೆ

ನನ್ನ ಒಲವಿನ ಉಡುಗರೆಯು
ನಿನ್ನ ಒಪ್ಪಿಗೆಯನ್ನು ಕಾಯುತ್ತಿದೆ ,
ನಿನ್ನ ಪ್ರೀತಿಯ ಹಣತೆ
ಹಚ್ಚಬಾರದೆ ಗೆಳತಿ ನನ್ನ ಎದೆಯಲಿ .

ಮಿಡಿಯುತಿದೆ ನನ್ನ ಮನಸ್ಸು
ನಿನ್ನ ಪ್ರೀತಿಯ ಅಪ್ಪುಗೆಗೆ ,
ನೀನೆಂದು ನೀಡುವೆ ತಂಪು
ನಿನ್ನಿಂದ ಆದ ಈ ಒಲವಿನ ಬೇಗೆಗೆ .

ಬುಧವಾರ, ಮೇ 23, 2012

My poem

ನಿನ್ನ ಪ್ರೀತಿಯ ನದಿಗೆ
ನಾನಾಗುವೆ ಕಡಲು ,
ನಿನ್ನ ಮಧುರವಾದ ಸ್ನೇಹಕ್ಕೆ
ನಾನಾಗುವೆ ತಡೆ ಇಲ್ಲದ ಮುಗಿಲು ,

ನಿನ್ನ ಹೃದಯದ ನೋವಿಗೆ
ನಾ ತುಂಬುವೆ ಸಂತಸದ ಹೊನಲು , 
ನಿನ್ನ ಮನಸಿನ ಮೌನದ ಮಾತಿಗೆ 
ನಾನಾಗುವೆ ಸವಿನುಡಿಯು.

ನಿನ್ನ ಮನಸಿನ ಭಾವಗಳನ್ನು 
ನಾ ಮಾಡುವೆ ನನಸು ,
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ 
ನಾನಾಗುವೆ ನೆರಳು .

ಸೋಮವಾರ, ಮಾರ್ಚ್ 5, 2012

ಎಚ್ಚರ

ಮನದ ಹಿಂದಿರುವ ಮಾತನ್ನು ನೀ ಹೇಗೆ ತಿಳಿಯುವೆ ,
ನಗೆಯ ಹಿಂದಿನ ಅಳುವನ್ನು ನೀ ಹೇಗೆ ಅರಿಯುವೆ ,
ನನ್ನೆದೆಯ ಒಳಗಿನ ತಳಮಳ ನೀ ಹೇಗೆ ಸವಿಯುವೆ ,
ಈ ತರದ ವೇದನೆಯ ಉಣಿಸಬೇಡ ನನ್ನೆದೆಯಲ್ಲಿ ,
ನನ್ನಿರುವೆಕೆಯೇ ನಿನಗೆ ಭಾರವಾದಿತು ಎಚ್ಚರ !

ಕರಿಮುಗಿಲಂತೆ ನೋವುಗಳೇ ನನ್ನೆದೆಯಲಿ ಅಡಗಿರುವುದು,
ಮಳೆಯೆಂಬ ಅಳು ಬರದೇ ಮನಸ್ಸು ತುಂಬಾ ಭಾರವಾಗಿದೆ ,
ನನ್ನೆದೆಯ ನೋವಿನ ಕೊಳವು ಎಂದೋ ತುಂಬಾಗಿದೆ,
ಸಣ್ಣ ಹೂ ಎಸೆದರು ನೋವು ತುಳುಕಿತು ಎಚ್ಚರ !

ಕನಸಿನ ತೆರೆಯನ್ನು ಸರಿಸಿ ,ವಾಸ್ತವ ಸ್ಥಿತಿಯ ನೀನೊಮ್ಮೆ ನೋಡು ,
ನಿನಗಾಗಿ ನಾನಿಂದು ಕಂಬನಿಯ ಮಿಡಿಯುತ್ತಿರುವೆ ,
ನನ್ನ ನೋವಿನ ಹಿಂದಿನ ಕಥೆಯ ತಿಳಿಯದೆ ನೀ ಸುಖವಾಗಿರು ,
ನನ್ನ ನೋವು ತಿಳಿಯಲು ಹೋಗಿ ನಿನ್ನ ನೋವೆ ಹೆಚ್ಚಾದಿತು ಎಚ್ಚರ !

ಬುಧವಾರ, ಜನವರಿ 25, 2012

ಗೆಳತಿ


ಮನಸ್ಸೆಂಬ ಕತ್ತಲೆಯ ನಭದಲಿ  
ಚಂದ್ರನಂತೆ ಬಂದು ನಿಂತೆ ನೀನು, 
ಮೋಡದಂತಹ ಪ್ರೀತಿಯನ್ನು ಕರಗಿಸಿ 
ಮಳೆಹನಿಯಾಗಿ ಸುರಿದೆ ನನ್ನ ಬಾಳಲಿ ನೀನು, 
ಸೋಲೆಂಬ ನನ್ನ ಬಾಳಿನ ಬಳ್ಳಿಗೆ 
ಆಸರೆಯ ಮರವಾದೆ ನೀನು, 
ಕಷ್ಟಗಳೆ ತುಂಬಿದ ನನ್ನ ಬಾಳೆಂಬ ದುಂಬಿಗೆ 
ಸಿಹಿಯಾದ ಮಧು ಕೊಡುವ ಹೂವದೆ ನೀನು , 
Pages (5)12345 Next
Related Posts Plugin for WordPress, Blogger...