ಸಿಹಿಯಾಗಿದೆ ನಿನ್ನ ನೆನಪು ಯಾವಾಗಲು,
ಅನುದಿನವು ಕಾಣುತ್ತಿರುವೆನು ನೀ ಬರುವ ದಾರಿಯನ್ನು,
ಹೇಗೆ ಹೇಳಿಕೊಳ್ಳಲಿ ನನ್ನ ಮನದ ತಳಮಳವನ್ನು,
ಕನಸಲ್ಲು ಕಾಣುತ್ತಿರುವೆ ನಾ ನಿನ್ನ ಮೊಗವನ್ನು.
ಬೇಕೆನಿಸಿದೆ ನನಗೆ ನೀನು ಪ್ರತಿ ಅಣು ಅಣುವು,
ಹೃದಯವೂ ಯಾವಾಗಲು ಬಯಸಿದೆ ನಿನ್ನ ಸನಿಹವನ್ನು,
ನಿನ್ನ ಒಲವನ್ನೇ ಕಾಣುತ್ತಿರುವೆ ಪ್ರತಿ ಕ್ಷಣವೂ,
ಇದೇಕೆ ಹೀಗೆ ಕಾಡುತ್ತಿರುವೆ ನನ್ನ ನೀನು.
ಮನದ ಆಸೆಯನ್ನು ಹೇಳದೇ ಪರಿತಪಿಸುತ್ತಿರುವೆ ನಾನು,
ಇಲ್ಲಿಯವರೆಗೆ ಇದ್ದ ಹಾಗೆ ಇರಲಾರೆನು ಮುಂದೆ ನಾನು,
ಒಂದೇ ಒಂದು ಬಾರಿ ಬಂದು ನೋಡು ನೀನು,
ಕನಸಿನಲ್ಲಿಯೇ ಕಟ್ಟಿರುವೆ ಪ್ರೇತಿಯ ಗೋಪುರವ ನಿನಗೆ ನಾನು.
ಇದ್ಯಾವ ಮೋಡಿಯ ಮಾಡಿದೆ ಕನಸಿನ್ನಲಿಯೇ ನೀನು,
ಪ್ರೀತಿಯೆಂಬ ಕನಸಿನ ಕೋಟೆಯಲ್ಲಿ ಭನ್ದಿಸಿರುವೆ ನನ್ನ ನೀನು,
ನೀನ್ಯಾರೆಂದು ತಿಳಿಯದೇ ಕೊರಗುತ್ತಿರುವೆ ದಿನವೆಲ್ಲ ನಾನು,
ದೇವರೇ ದಯಮಾಡಿ ತೋರಿಸು ನನ್ನ ಕಾಡುತ್ತಿರುವ ಆ ಚೆಲುವೆಯನ್ನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ