ಬುಧವಾರ, ಡಿಸೆಂಬರ್ 7, 2011

IT lifuuuu.....Ishtenaaa......

hmmm ಏನು ಮಾಡಲಿ , ಏನು ಬರಿಲಿ ಅಂತ ಯೋಚನೆ ಮಾಡ್ತಾ ಇರ್ಬೇಕಾದ್ರೆ ನನ್ನ ಮನಸ್ಸಿಗೆ ತೋಚಿದನ್ನ ಸುಮ್ಮನೆ ಬರಿತ ಹೋಗಿದೀನಿ .Hope you like.:)

IT ಇದು ನನ್ನ ಎರಡು ವರ್ಷದ ಅನುಭವದ ಪ್ರಕಾರ ಒಂದು ದೊಡ್ಡ ಸಮುದ್ರ ಇದ್ದ ಹಾಗೇ. ಎಷ್ಟೇ ಈಜಿದರು ದಡ ಸೇರೋಲ್ಲ ಅಂತಾರಲ್ಲ ಹಾಗೇ . ಆದರೆ ಇದರಲ್ಲೂ ಈಜಿ ಸಾಧನೆ ಮಾಡಿರೋರು ತುಂಬಾ ಜನಾನೇ ಇದಾರೆ .ಸಮುದ್ರ ಏಕೆ ಅಂದ್ರೆ ನಾನಿಲ್ಲಿ ಹಲವಾರು ಹೊಸ ವಿಷಯಗಳನ್ನ ಕಲಿತ ಇದೀನಿ .ಆದ್ರೆ ನಾನು ಹಿಂತುರುಗಿ ನೋಡಿದರೆ ಅದೆಲ್ಲ ಹಳೆಯದಾಗಿ ಏನು ಕಲ್ತೆ ಇಲ್ಲ ಅನ್ಸುತ್ತೆ. ಇದು ನನ್ನ ಅನುಭವ .ಬೇರೆಯವರು ಹೇಗೋ ನಂಗೊತ್ತಿಲ್ಲ .


ಹಾಗೇ ಮತ್ತೊಂದು ಕಾರಣಾನು ಇದೆ .ಈ IT ಎಂಬ ಸಮುದ್ರದಲ್ಲಿ  ದೊಡ್ಡ ದೊಡ್ಡ ತಿಮಿಂಗಿಲಗಳು ಇದೆ .ಇಲ್ಲಿ ಕಷ್ಟ ಪಟ್ಟು ಈಜಿದರೆ ಮಾತ್ರ ದಡ ಸೇರ್ತಿವಿ ಇಲ್ಲ ಅಂದ್ರೆ ನಮ್ಮಂತ ಸಣ್ಣ ಮೀನುಗಳನ್ನ ತಿಂದ್ಬಿಟ್ಟು ಮುಂದೆ ಹೋಗೋ ಎಷ್ಟೋ ತಿಮಿಂಗಿಲಗಳು ಕಾಯ್ತಾ ಕುತಿರ್ತವೆ .ಇದು ನನ್ನ ಸ್ನೇಹಿತರೆಲ್ಲರ ಅನುಭವ .

IT ಲೀ ಬರಿ ಕೆಲಸ ಅಷ್ಟೇ ಅಲ್ಲ ಮೋಜು ಮಸ್ತಿನು ಇರುತ್ತೆ . ಕೆಲವರು ಕೆಲ್ಸಕ್ಕೆ ಸೇರಿದ ಮೇಲೆ ಒಳ್ಳೆ ಗುಣ ಕಲಿತರೆ ಇನ್ನ ಕೆಲವರು ಕಲಿಬರದನ್ನ ಕಲಿತು ಹಾಳಾಗ್ ಹೋಗ್ತಾರೆ . ನಾನು ಇದ್ರಲ್ಲಿ ಇವಾಗ ಮದ್ಯದಲ್ಲಿ ಇರ್ಬೋದು ಅನ್ಸುತ್ತೆ ಹೇ ಹೇ ...:-D ನೋಡೋಣ ಇದು ನನ್ನ ಎಲ್ಲಿಯವರೆಗೂ ಕರ್ಕೊಂಡು ಹೋಗುತ್ತೆ ಅಂತ .

ವಿಧ್ಯಾರ್ಥಿಗಳಗಿದ್ದಾಗ ನಮ್ಮ ಯೋಚನೇನೆ ಬೇರೆ ತರ ಇರ್ತಿತ್ತು ಒಂದು ಓದು ಇಲ್ಲ ಆಟ ಅಷ್ಟೇ ಇರ್ತಿತ್ತು .ಒಂದೊಂದ್ ಸಲ ಅನ್ಸುತ್ತೆ ಇನ್ನು ಸ್ವಲ್ಪ ಓದ್ಬೇಕಿತ್ತೇನೋ, ಎಷ್ಟು ಬೇಗ ನನ್ನ ಕಾಲೇಜ್ ಲೈಫ್ ಮುಗಿತಲ್ಲ ಅಂತ .ಆದ್ರೆ ಕಾಲ ಕೆಲ್ಬೆಕಲ್ವ ಅದು ಸುಮ್ನೆ ಒಡುತ್ತಾನೆ ಇರುತ್ತೆ. ಯಾರ್ ಮಾತು ಕೇಳಲ್ಲ .ಒಂದು ಸಲ ಈ ಕಾಲೇಜ್ ಜೀವನ ಮುಗಿತು ಅಂದ್ರೆ ಮತ್ತೆ ಹೊಸ ಪ್ರಪಂಚನ್ನೇ ತೆರೆದ್ಕೊಲ್ಲುತ್ತೆ. ಅಲ್ಲಿ ಎಲ್ಲವು ಅಪರಿಚಿತ ನಾನು ಮುಂದೆ ಏನ್ ಆಗ್ತಿನೋ, ನನ್ನ ಜೀವನ ಹೇಗೋ ಬರೀ ನಾಳೆಯ ಬಗ್ಗೆನೇ ಚಿಂತೆ .ಇದೆಲ್ಲ ನೋಡ್ತಾ ಇದ್ರೆ ಆ ಕಾಲೇಜ್ ಜೀವನ ಎಷ್ಟು ಚೆಂದ ಅಲ್ವಾ ಅನ್ಸುತ್ತೆ.

ಈ ಎಲ್ಲ ಅಂತೆ ಕಂತೆ ಚಿಂತೆಗಳನೆಲ್ಲ ಇದ್ಕೊಂಡೆ ಈ ಫೀಲ್ಡ್ಗೆ ಬಂದು ಸೇರಿದ್ದು.ಇದಕ್ಕೆ ಸೇರೋತ್ಕಿಂತ ಮುಂಚೆ ಅದು ಎಷ್ಟು ಕಷ್ಟ ಪಟ್ನೋ ಆ ದೇವರೇ ಬಲ್ಲ .ನನ್ನ ಪುಣ್ಯ ಚೆನ್ನಾಗಿತ್ತು ಅನ್ಸುತ್ತೆ ಒಳ್ಳೆ ಕೆಲಸ ಸಿಕ್ತು  ಹಾಗೇ ಹೊಸ ವಿಷಯಗಳನ್ನ ಕಲಿಯೋ ಅವಕಾಶನು ಸಿಕ್ತು .ಇವಾಗ್ಲು ದಿವ್ಸ ಕನಸು ಕಾಣ್ತಾ ಆ ಕನಸನೆಲ್ಲ ಹೇಗೆ ನನಸು ಮಾಡೋದು ಅಂತ ಯೋಚನೆ ಮಾಡೋದೇ ಜೀವನ ಆಗೋಗಿದೆ. ಎಷ್ಟು ನಿಜ ಅಲ್ವಾ ನಮಗೆ ಎಷ್ಟೇ ಸಿಕ್ರು ಮತ್ತೆ ಬೇಕು ಮತ್ತೆ ಬೇಕು ಅನ್ನೋದು . ಇದು ಮನುಷ್ಯನ ಸಹಜ ಗುಣ ತಾನೆ . ನಾನೊಬ್ಬನೇ ಅಲ್ಲ ಎಲ್ಲರಲ್ಲೂ  ಈ ರೋಗ ಇದ್ದೆ ಇದೆ. ಹಾಗೇ ಇಲ್ಲಿ ನಾನು ಕನಸು ಕಾಣ್ತಾ ಕಾಣ್ತಾ ಈ ಲೈಫ್ ನಲ್ಲಿ ಹಾಗೇ ಮುಂದೆ ಸಗ್ತಾನೆ ಇದೀನಿ .ಅದು ಎಲ್ಲಿಗೆ ಹೋಗಿ ತಲುಪುತ್ತಿನೋ ಆ ದೇವರೇ ಬಲ್ಲ ಹ ಹ....:-D

Please give me your feed back so that i can improve my writing skill and also presentation skill. This my 1st story.

1 ಕಾಮೆಂಟ್‌:

Related Posts Plugin for WordPress, Blogger...