ಮೊದಮೊದಲು ಕೇಳಿದ ಆ ದ್ವನಿಯು ಮೀಟೀತು ನನ್ನೆದೆಯಲಿ ,
ಸಹಜವಾಗೇ ಸ್ಪಂದಿಸಿತು ನನ್ನೀ ಮನಸ್ಸು ನಿನ್ನೆಡೆಯಲಿ,
ಮತ್ತೆ ಮತ್ತೆ ಕೇಳಬೇಕೆನಿಸಿತು ನಿನ್ನ ಮಾತಿನ ದಾಟಿಯನ್ನು,
ಎಬ್ಬಿಸಿತು ನನ್ನಲೊಂದು ಆಶಾಕಿರಣದ ಅಲೆಯನ್ನು.
ನೀ ಮಾತನಾಡಿದರೆ ಸಾಕೆಂಬ ಭಾವ ಮೂಡಿತು ಮನದಲಿ,
ನೋಡ ನೋಡುತ್ತಲೇ ಕಳೆದೋದೆ ನಿನ್ನ ಗೆಳೆತನದ ಬೆಸುಗೆಯಲಿ ,
ಮಾತು ಬೆಳ್ಳಿ ಮೌನ ಬಂಗಾರವಾಯ್ತು ನನ್ನ ಮಾತು ನಿನ್ನೆದುರಲಿ ,
ಆಧ್ಯೆಗೆ ಬಂಧಿಸಿರುವೆ ನನ್ನ ನೀ ,ನಿನ್ನ ಮಧುರವಾದ ಮಾತಿನಲಿ .
ಹತ್ತದೆ ವಿಧಿಯಿಲ್ಲವಾಯ್ತು ನೀನಿಟ್ಟ ಮಾತಿನ ಏಣಿಯಲಿ ,
ನಿಮಿಷ ಮಾತ್ರದಲ್ಲೇ ನನ್ನ ಕೂರಿಸಿದೆ ನಿನ್ನೆದೆಯ ಗೂಡಿನಲ್ಲಿ,
ಸಿಕ್ಕಿತೊಂದು ಮಧುರವಾದ ಅನುಭವ ನಿನ್ನಿ ಗೆಳೆತನದಲಿ,
ನನ್ನನೇ ನಾ ಮರೆಯುತಿರುವೆ ನಿನ್ನಿ ಸಂಗದಲಿ ,
ಏನೆಂದು ಬಣ್ಣಿಸಲಿ ಈ ಗೆಳೆತನದ ಸೊಬಗನ್ನ ,
ಇಲ್ಲಿ ಹಂಚಿಕೊಳ್ಳಬಹುದು ನನ್ನ ನೋವು ನಲಿವಿನ ಪ್ರತಿಯೊಂದು ಸುಖವನ್ನ ,
ಬಾರದಿರಲಿ ಎಂದೆಂದೂ ನಮ್ಮಿಬ್ಬರ ಸ್ನೇಹಕ್ಕೆ ಬರ ,
ಎಂದೆಂದೂ ನಾನಿರುವೇನು ಇಳಿಸಲು ನಿನ್ನ ಮನದಲ್ಲಿನ ಭಾರ .
ಯಾರಿಗೇನು ಕಮ್ಮಿ ಇಲ್ಲ ನಮ್ಮಿಬ್ಬರ ಈ ಗೆಳೆತನ ,
ಸಾರೋಣ ಇಡೀ ಜಗತ್ತಿಗೆ ಈ ಗೆಳೆತನದ ಸಾರ.
ಇದೊಂದೇ ಅಲ್ಲವೇ ನೊಂದ ಮನಕ್ಕೆ ನೀರೆರೆಯುವ ಅಮೃತ ಸಿಂಚನ.
ಇದೆ ಅಲ್ಲವೇ ದೇವರು ನಮಗೆ ಕೊಟ್ಟ ಅದ್ಭುತವಾದ ವರ .
*ಸಚ್ಚಿ*
Copy rights reserved ;)
One of my favourite :)
ಪ್ರತ್ಯುತ್ತರಅಳಿಸಿThanks anu :)
ಪ್ರತ್ಯುತ್ತರಅಳಿಸಿ