ಮನಸ್ಸೆಂಬ ಕತ್ತಲೆಯ ನಭದಲಿ
ಚಂದ್ರನಂತೆ ಬಂದು ನಿಂತೆ ನೀನು,
ಮೋಡದಂತಹ ಪ್ರೀತಿಯನ್ನು ಕರಗಿಸಿ
ಮಳೆಹನಿಯಾಗಿ ಸುರಿದೆ ನನ್ನ ಬಾಳಲಿ ನೀನು,
ಸೋಲೆಂಬ ನನ್ನ ಬಾಳಿನ ಈ ಬಳ್ಳಿಗೆ
ಆಸರೆಯ ಮರವಾದೆ ನೀನು,
ಕಷ್ಟಗಳೆ ತುಂಬಿದ ನನ್ನ ಬಾಳೆಂಬ ದುಂಬಿಗೆ
ಯಾರೋ ಮಾಡಿದ ಈ ಮನಸ್ಸಿನ ಹುಣ್ಣಿಗೆ
ಔಷಧಿ ಕೊಡುವ ವೈದ್ಯೆಯಾದೆ ನೀನು,
ಚೈತನ್ಯವೇ ಇಲ್ಲದ ಈ ದೇಹಕ್ಕೆ
ಸ್ಪೂರ್ತಿ ನೀಡುವ ಚಿಲುಮೆಯಾದೆ ನೀನು,
ಗೆಲುವೆ ಕಾಣದ ಈ ಮೊಗಕ್ಕೆ ,
ಗೆಲುವು ತೋರಿಸಿ ಕೊಟ್ಟ ಗುರುವಾದೆ ನೀನು,
ದೇವರು ಸೃಷ್ಟಿಸಿದ ಈ ದೇಹಕೆ
ಜೀವದ ಸೆಲೆಯಾದೆ ನೀನು,
ನನ್ನ ಮನಸ್ಸೆಂಬ ಕೋಟೆಯನ್ನು
ಪ್ರೀತಿಯಿಂದ ಗೆದ್ದ ಜೀವದ ಗೆಳತಿ ನೀನು .
* ಸಚ್ಚಿ *
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ