ಅಮ್ಮ ನಿನ್ನ ಮಡಿಲಲ್ಲಿ ಮತ್ತೊಮ್ಮೆ ಮಗುವಾಗುವಾಸೆ,
ಸಾಕಾಗಿದೆ ಈ ಜಂಜಾಟದ ಬದುಕು ಮತ್ತೊಮ್ಮೆ ನನ್ನ
ಬಾಲ್ಯಕ್ಕೆ ಮರಳುವಾಸೆ,
ನಿಷ್ಕಲ್ಮಶಾವಾದ ಆ ವಯಸ್ಸು,ಯಾರಿಗೂ ನೋಯಿಸದ ಆ ಮನಸ್ಸು
ಮತ್ತೊಮ್ಮೆ ಪಡೆಯುವಾಸೆ
ಮಣ್ಣಿನಲ್ಲಾಡುತ್ತಿದ್ದ ದಿನಗಳು,ಸಮಯಕ್ಕೆ ಬೆಲೆಯೇ ಇಲ್ಲದ
ಆ ಕ್ಷಣಗಳಿಗೆ ಮತ್ತೊಮ್ಮೆ ಹೋಗುವಾಸೆ ,
ನಾಳೆಯ ಚಿಂತೆಯೇ ಇಲ್ಲದೇ,ನಿನ್ನೆಯ ಕೊರಗಿಲ್ಲದೇ ನಲಿಯುತ್ತಿದ್ದ
ದಿನಗಳಿಗೆ ಮತ್ತೊಮ್ಮೆ ಜಿಗಿಯುವಾಸೆ,
ಪ್ರೀತಿಯೇ ಗೊತ್ತಿರದ ಆ ಮನಸ್ಸು,ಸದಾ ಸ್ನೇಹಿತರೊಂದಿಗೆ ಆಡುತ್ತಿದ್ದ
ಆ ವಯಸ್ಸು ಮಾತೊಮ್ಮೆ ಹೊಂದುವಾಸೆ,
ರಾತ್ರಿಯ ಗುಮ್ಮನಿಗೆ ಹೆದರಿ ,ಅಮ್ಮನನ್ನು ಅಪ್ಪಿ ಮಲಗುತ್ತಿದ್ದ
ಆ ಭಯವನ್ನು ಮತ್ತೊಮ್ಮೆ ಕಾಣುವಾಸೆ,
ಸಣ್ಣ ಸಣ್ಣ ವಸ್ತುಗಳಿಗೆ ಹೊಡೆದಾಡುತ್ತಾ,ಮತ್ತೆ ಒಂದಾಗಿ ಆಡುತ್ತಿದ್ದ
ಆ ಆಟವನ್ನು ಮತ್ತೊಮ್ಮೆ ಆಡುವಾಸೆ,
ಎಷ್ಟೊಂದು ಮಧುರವಲ್ಲವೇ ಆ ಬಾಲ್ಯದ ದಿನಗಳು
ಮತ್ತೊಮ್ಮೆ ಮಗುವಾಗಿ ಹುಟ್ಟಿ ನನ್ನ ಅಮ್ಮನ ತೋಳಿನಲ್ಲಿ
ಮಲಗೂವಾಸೆ ,

Dear,
ಪ್ರತ್ಯುತ್ತರಅಳಿಸಿpls post such kavanas it feels nice to read and
imagine about our child age...:)
Thanks brother :) Ya i ll ....keep visiting :)
ಪ್ರತ್ಯುತ್ತರಅಳಿಸಿIts too nice...:)
ಪ್ರತ್ಯುತ್ತರಅಳಿಸಿThanks sha...
ಪ್ರತ್ಯುತ್ತರಅಳಿಸಿಈ ನಿಮ್ಮ ಸಾಲುಗಳನ್ನು ಓದಿ ನನಗೆ ನನ್ನ ಭಾಲ್ಯದ ಸವಿ ನೆನಪುಗಳು ಮತ್ತೆ ಎದ್ದು ಬಂದು ನನ್ನ ಮನವನ್ನು ತಟ್ಟಿ ತಟ್ಟಿ ಎಬ್ಬಿಸಿತ್ತಿವೆ.
ಪ್ರತ್ಯುತ್ತರಅಳಿಸಿತುಂಬಾ ಅಭಿನಂದನೆಗಳು