ಸೋಮವಾರ, ಡಿಸೆಂಬರ್ 12, 2011

ಚಂದ್ರ ಗ್ರಹಣ (Lunar eclipse)

ಮೊನ್ನೆ ಅಂದ್ರೆ (೧೦-೧೨-೨೦೨೨) ಜಗತ್ತಿನಾದ್ಯಂತ ಚಂದ್ರ ಗ್ರಹಣ ಇತ್ತು . ಇದನ್ನ ಸಾವಿರಾರು ಜನ ನೋಡಿ ಕಣ್ಣ ತುಮ್ಬಿಸ್ಕೊಂದ್ರು ಸಹ .ಇದರಲ್ಲಿ ನಾನು ಒಬ್ಬ ಮತ್ತು ನನ್ನ  ಕೆಲವು ಸ್ನೇಹಿತರು ಸಹ .ನಾನು ಏನ್ ಬರಿಲಿ ಅಂತ ಯೋಚನೆ ಮಾಡ್ತಾ ಇದ್ದೆ ಅವಾಗ ಈ ಟಾಪಿಕ್ ಸಿಕ್ತು ಹಾಗೆ ಬರ್ದಿದೀನಿ just enjoy it :)

ಹಾಗಾದ್ರೆ ಚಂದ್ರ ಗ್ರಹಣ ಅಂದ್ರೆ ಏನು ?ನಾನು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಕೊಡ್ತೀನಿ. ಚಂದ್ರ ಗ್ರಹಣ ಅಂದ್ರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿಳದಂತೆ ಭೂಮಿ ತಡೆಯುತ್ತೆ ಆ ಸಂಧರ್ಬದಲ್ಲಿ ಚಂದ್ರನ ಮೆಲ್ಮಾಯಲ್ಲ ಸ್ವಲ್ಪ ಕಪ್ಪದಂತೆ ಕಾಣುತ್ತೆ . It occurs only when sun ,earth,moon aligned exactly .ಅದು ಕೂಡ ಹುಣ್ಣಿಮೆಯ ದಿನ ಇದು ನಡೆಯುತ್ತೆ .


ಇದಿಷ್ಟು ಗ್ರಹಣದ ವಿಷಯ ಆದ್ರೆ ಇನ್ನ ನಮ್ಮ ಟಿವಿ channels  ವಿಷಯನೇ ಬೇರೆ.ಮೊನ್ನೆ ದಿನ ಟಿವಿಲೆಲ್ಲ ಅದೇ ಒಂದು ದೊಡ್ಡ ವಿಷಯ. ಪದೇ ಪದೇ ಅದೇ ಸುದ್ದಿನ ಪ್ರಸರಣ ಮಾಡಿದ್ದೆ ಮಾಡಿದ್ದು .ಈ ಗ್ರಹಣ ಇಂಥದ್ದು ,ಇದರಿಂದ ಈ ರಾಶಿಯವರಿಗೆ ಏನಾಗುತ್ತೆ ,ಆ ರಾಶಿಯವರಿಗೆ ಏನು ಕೆಟ್ಟದಾಗುತ್ತೆ ಫುಲ್ ಇದೆ discussion .ಇದೆಲ್ಲ ನಿಜವಾಗ್ಲೂ ಆಗುತ್ತೆನ್ರಿ ನನ್ಗೊಂತು ಗೊತ್ತಿಲ್ಲ .ಏಕೆಂದರೆ ನನ್ಗೊಂತು ನನ್ನ ರಾಶಿನೇ ಗೊತ್ತಿಲ್ಲ .:-D

ಇನ್ನಾ ಗ್ರಹಣ ಬಂದಾಗ ಕೆಲವರು ಹೇಳ್ತಾರೆ ಹೊರಗಡೆ ಹೋಗಬೇಡ ,ಚಂದ್ರನ ನೋಡಬೇಡ ಅದು ಇದು ಅಂತ ಬರಿ ಹೇಳೋರೆ.ಆದ್ರೆ ನಾನು ಇದರ ಬಗ್ಗೆ ತಲೆ ಕೆಡ್ಸ್ಕೊಲ್ದೆ ಸುಮ್ಮನೆ ನೋಡ್ದೆ ಎಂಜಾಯ್ ಸಹ ಮಾಡ್ದೆ ಹಾಗೆ ನನ್ನ ಸ್ನೇಹಿತರಿಗೂ ನೋಡ್ಲಿಕ್ಕೆ ಹೇಳ್ದೆ. ಅದ್ರಲ್ಲಿ ಕೆಲವರು ಹೇಳಿದ್ರು ಹೇ ನಮ್ಮನೇಲಿ ನೋಡ್ಲಿಕ್ಕೆ ಬಿಡ್ತಿಲ್ಲ ಫುಲ್ restriction  ಅಂತ .ಇನ್ನಾ ಕೆಲವರು ಹೊರಗಡೆ ಹೋದರೆ ಏನಾಗುತ್ತೋ ಅಂತ horagadene ಹೋಗಿಲ್ಲ . ಹೇ ಹೇ :-D


ಎಲ್ಲರಿಗೂ ಗೊತ್ತು its just a natural process ಅಂತ .ಆದ್ರುಅದಕ್ಕೆ ಅಂತೆ ಕಂತೆಗಳನೆಲ್ಲ ಕಟ್ಟಿ ಇದನ್ನೇ ಬಂಡವಾಳ ಮಾಡ್ಕೊಲ್ಲೋ ಜನ ತುಂಬಾನೇ ಇದಾರೆ. ಮೊನ್ನೆ ಟಿವಿಯವರು ಮಾಡ್ತಾ ಇದ್ದದ್ದು ಅದನ್ನೇ.ಆ ರಾಶಿಯವರು ಈ ಹೋಮ ಮಾಡ್ಸ್ಬೇಕು ಈ ರಾಶಿಯವರು ಈ ದೇವರನ್ನ ಆರಾಧಿಸಬೇಕು ಅಂತ ಹೇಳಿ ತಮ್ಮ ಟಿವಿಯಾ TRP ರೇಟ್ ಹೆಚ್ಚು ಮಾಡ್ಕೊಂಡ್ರೆ ಹೊರತು ನಮ್ಮ ಮುಗ್ಧ ಜನರನ್ನ ಇನ್ನಷ್ಟು ಮುಗ್ಧರನ್ನಾಗಿ ಮಾಡಿದ್ರು ಅಷ್ಟೇ. ಪಾಪ ನಮ್ಮ ಕೆಲವು ಜನಗಳು ಟಿವಿಲಿ ಏನೇ ತೋರ್ಸ್ಲಿ ಅದನ್ನೇ ನಿಜ ಅಂತ ನಂಬಿ ಅದನ್ನೇ follow ಮಾಡೋ ಜನ ತುಂಬಾನೇ ಇದಾರೆ.ಇವರೆನಲ್ಲ ಆ ದೇವರೇ ಕಾಪಾಡಬೇಕು. Atlast its my opinion.ನಿಮ್ಮೆಲ್ಲರ ಅಭಿಪ್ರಾಯ ಹೇಗೋ ನಂಗೊತ್ತಿಲ್ಲ.ಏಕೆಂದರೆ ಅವರವರ ಮನದಂತೆ ಅವರವರ ದೃಷ್ಟಿಯು ಅಂತ ದೊಡ್ದೊರೆ ಹೇಳಿದರೆ.ನಿಮ್ಮ ಅಭಿಪ್ರಾಯ ಏನು ಅಂತ ದಯವಿಟ್ಟು ತಿಳಿಸಿ .:-)


3 ಕಾಮೆಂಟ್‌ಗಳು:

Related Posts Plugin for WordPress, Blogger...