ನೀನಿರುವೆ ಮನದಲಿ ಹೂವಿನಲ್ಲಿರುವ ಮಧುವಂತೆ ,
ನೀನಿರುವೆ ನನ್ನಲಿ ನನ್ನ ಹೃದಯ ಬಡಿತದಂತೆ ,
ನೀನಿರದ ಸಮಯಕೆ ಕಣ್ಣ ಹನಿಗಳೇ ಸಾಕ್ಷಿ ,
ನೀನಿರದ ಬದುಕಿಗೆ ನನ್ನ ಮರಣವೇ ಸಾಕ್ಷಿ.
ಹೊಮ್ಬಿಸಿಲಿನೋಳು ಮೂಡಿದ
ಬಿಸಿ ಸಂಚಿನ ಕಿರಣಗಳಂತೆ ,
ಭೂ ತಾಯಿಯ ಬಿಸಿಯ ತಣಿಸಲು
ಬೀಳುವ ಮಳೆಯ ಸಿಂಚನದಂತೆ ,
ನೀ ಬಂದೆ ನನ್ನ ಬಾಳಲಿ ,
ಕತ್ತಲೆಯಲಿ ಕಾಣುವ ಮಿಂಚಿನ ಹುಳದಂತೆ .
ನನ್ನ ಬಳಿ ಇದ್ದ ಏಕಾಂತಕೆ ನೀ
ದಾಳಿ ಮಾಡಿದೆ ಅಂದು ,
ಇಂದು ಕಾಣದೆ ದೂರಾದೆ ,
ಮನದೊಳು ಬೆಂಕಿಯ ಸುರಿದೆ,
ಏಕೆ ಹೀಗೆ ಮಾಡಿದೆ ಎಂದು
ಕೇಳಲು ಆಗದೆ ಪರಿತಪಿಸುತ್ತಿರುವೆ
ಇಂದು ನಾನು .
ಸಂತೋಷವಿಲ್ಲದೇ ಚೀರುತ ಕುಣಿಯತಿದೆ
ಹಿಡಿತವಿಲ್ಲದ ಈ ಮನಸು,
ನಿನ್ನ ಬರುವಿಕೆಗಾಗಿ ಕಾಣುತಿರುವೆ
ದಿನವು ಸಿಹಿಯಾದ ಕನಸು,
ನೀ ಬರಲಾರೆ ಅಂತ ಗೊತ್ತಿದ್ದರು ,
ದಿನವು ದೇವರಲಿ ಕೇಳುವೆ,
ಮಾಡು ಈ ಕನಸು ನನಸು ಎಂದು..
\ \**ಸಚ್ಚಿ **\\
ನೀನಿರುವೆ ನನ್ನಲಿ ನನ್ನ ಹೃದಯ ಬಡಿತದಂತೆ ,
ನೀನಿರದ ಸಮಯಕೆ ಕಣ್ಣ ಹನಿಗಳೇ ಸಾಕ್ಷಿ ,
ನೀನಿರದ ಬದುಕಿಗೆ ನನ್ನ ಮರಣವೇ ಸಾಕ್ಷಿ.
ಹೊಮ್ಬಿಸಿಲಿನೋಳು ಮೂಡಿದ
ಬಿಸಿ ಸಂಚಿನ ಕಿರಣಗಳಂತೆ ,
ಭೂ ತಾಯಿಯ ಬಿಸಿಯ ತಣಿಸಲು
ಬೀಳುವ ಮಳೆಯ ಸಿಂಚನದಂತೆ ,
ನೀ ಬಂದೆ ನನ್ನ ಬಾಳಲಿ ,
ಕತ್ತಲೆಯಲಿ ಕಾಣುವ ಮಿಂಚಿನ ಹುಳದಂತೆ .
ನನ್ನ ಬಳಿ ಇದ್ದ ಏಕಾಂತಕೆ ನೀ
ದಾಳಿ ಮಾಡಿದೆ ಅಂದು ,
ಇಂದು ಕಾಣದೆ ದೂರಾದೆ ,
ಮನದೊಳು ಬೆಂಕಿಯ ಸುರಿದೆ,
ಏಕೆ ಹೀಗೆ ಮಾಡಿದೆ ಎಂದು
ಕೇಳಲು ಆಗದೆ ಪರಿತಪಿಸುತ್ತಿರುವೆ
ಇಂದು ನಾನು .
ಸಂತೋಷವಿಲ್ಲದೇ ಚೀರುತ ಕುಣಿಯತಿದೆ
ಹಿಡಿತವಿಲ್ಲದ ಈ ಮನಸು,
ನಿನ್ನ ಬರುವಿಕೆಗಾಗಿ ಕಾಣುತಿರುವೆ
ದಿನವು ಸಿಹಿಯಾದ ಕನಸು,
ನೀ ಬರಲಾರೆ ಅಂತ ಗೊತ್ತಿದ್ದರು ,
ದಿನವು ದೇವರಲಿ ಕೇಳುವೆ,
ಮಾಡು ಈ ಕನಸು ನನಸು ಎಂದು..
\ \**ಸಚ್ಚಿ **\\
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ