ಶನಿವಾರ, ಡಿಸೆಂಬರ್ 10, 2011

ಮನಸಿನ ಮಾತು

ಇಳೆಯ ಮೇಲೆ ಪ್ರೀತಿಯ ಮಳೆಯ ಚುಂಬನ ,
ಹೂವಿನ ಮೇಲೆ ಮಂಜಿನ ಹನಿಗಳ ಸಿಂಚನ,
ತರುಗಳ ಮೇಲೆ ಲತೆ ಬಳ್ಳಿಗಳ ಬಂಧನ ,
ನನ್ನ ಮನಸಿನೊಳಗೆ ನಿನ್ನ ಒಲವಿನ ಸಂಚಲನ .

ನದಿ ತೊರೆಗಳಿಗೆ ಸಾಗರ ಸೇರುವ ಬಯಕೆ ,
ಹೂ-ದುಂಬಿಗಳಿಗೆ ನೇಸರನ ನೋಡುವ ಬಯಕೆ ,
ದಿನ ಬೆಳಗ್ಗೆ ಭಾಸ್ಕರನಿಗೆ ಭೂರಮೆಯ ನೋಡುವ ಬಯಕೆ ,
ನನಗೆ ನಿನ್ನ ಒಲವ ಪಡೆವ ಬಯಕೆ .

ಕತ್ತಲೆಯಲ್ಲಿದ್ದ ನನಗೆ ಹೊಸ ಬೆಳಕು ನೀನಾದೆ ,
ದುಃಖದಲ್ಲಿದ್ದ ಮನಸ್ಸಿಗೆ ಹೊಸ ಸ್ಪೂರ್ತಿ ನೀನಾದೆ ,
ನಿನ್ನ ಮುಸುನಗೆ ಕಂಡಾಗ ಕುಣಿದಾಡಿತು ತನುವು ,
ನೀ ಕಾಣದೆ ಹೋದರೆ ಸೋಲುವುದು ಈ ಮನವು .

ಕನಸಿನ ತೆರೆಯನ್ನು ನನಸಾಗಿಸುವ ಆಸೆ ,
ಮನಸಿನ ಹೊಳೆಯಲ್ಲಿ ಈಜಾಡುವ ಆಸೆ ,
ಮೋಡದ ಮರೆಯಲ್ಲಿ ಹಕ್ಕಿಯಂತೆ ಹಾರುವ ಆಸೆ ,
ಇದೆಲ್ಲ ಆಗುವುದಿಲ್ಲವೆಂದು ಮನಸಿನಲಿ ಮೂಡುವುದು ಒಂದು ಜಿಜ್ಞಾಸೆ .

1 ಕಾಮೆಂಟ್‌:

  1. ಮನಮುಟ್ಟುವ ಸಾಲುಗಳು.. ತುಂಬಾ ಚೆನ್ನಾಗಿದೆ ಈ ನಿಮ್ಮ ಒಂದು ಪ್ರೀತಿಯ ಮನಸಿನ ದುಗುಡದ ಮಾತುಗಳು.

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...