ಶುಕ್ರವಾರ, ಡಿಸೆಂಬರ್ 9, 2011

What is life(ಜೀವನ ಅಂದ್ರೆ ಏನು )

ಜೀವನ ಅಂದ್ರೆ ಏನು ? ಮೂರು ಅಕ್ಷರದಿಂದ ಕೂಡಿದ ಒಂದು ಪದ ಮಾತ್ರ ನಾ...ಅಲ್ಲ .... ನಿಜ ಹೇಳ್ಬೇಕು ಅಂದ್ರೆ ಜೀವನ ಅಂದ್ರೆ ಏನು ಅಂತ ನನಗೂ ಇನ್ನು
ಗೊತ್ತಿಲ್ಲ ಅದೇನೋ ಹೇಳ್ತಾರಲ್ಲ 'Life is like a ocean ,  no one knows where they ll reach at the end' ಎಷ್ಟು ನಿಜ ಅಲ್ವಾ..... ಅವರವರ ಮನದಂತೆ ಅವರವರ ಕಲ್ಪನೆ.
ಜೀವನ ಅಂದ್ರೆ ಏನು ಅಂತ ಗೊತ್ತಾಗಿದ್ದೆ ಬೆಂಗಳೂರಿಗೆ ಕಾಲಿಟ್ಟ ಮೇಲೆ. ನಾನು ಬೆಂಗಳೂರಿಗೆ ಕಾಲಿಟ್ಟ ಘಳಿಗೆನೆ ಚೆನ್ನಾಗಿರಲಿಲ್ಲ ಕಣ್ರೀ.ಏಕೆಂದರೆ software ಅನ್ನೋ ದೇವತೆ ಫುಲ್ ಮುನಿಸಿಕೊಂಡು ಬಿಟ್ಟಿದ್ಲು ಕಣ್ರೀ . ಅದ್ರು ನಾನ್ ಬಿಡ್ತೀನಾ... ಆಗಿನ ನನ್ನ ಉತ್ಸಾಹ ಹೇಗೆ ಹೇಳಲಿ ನಿಮಗೆ. ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತುಕೊಂಡು ಸಿಲಿಕಾನ್ ಸಿಟಿಗೆ ಕನಸನ್ನು ನನಸು ಮಾಡೋ ಆಸೆ ಇಂದ ಬಂದಿದ್ದೆ .
ಕೆಲಸ ಹುಡಕಬೇಕು, ಹಣ ಸಂಪಾದಿಸಬೇಕು ಅನ್ನೋ ಉತ್ಸಾಹ ಎಲ್ಲರಲ್ಲೂ ಸಹಜನೆ....ಅದು ನನ್ನಲ್ಲೂ ಇತ್ತು...ಆದ್ರೆ ನನ್ನ ಪ್ರಶ್ನೆ ಏನು ಅಂದ್ರೆ... B.E ಮುಗಿದ ಮೇಲೆ ಕೆಲಸ ಸಿಕ್ ಬಿಡುತ್ತ? ಬೆಂಗಳೂರಿನಲ್ಲಿ ಕೆಲಸ ಸಿಗೋದು ಅಂದ್ರೆ ಬಾಳೆ ಹಣ್ಣು ಸಿಪ್ಪೆ ತೆಗೆದು ತಿಂದಷ್ಟು ಸುಲಭ ಅಂದ್ಕೊಂಡ್ರ?

ಬೀದಿ ಬೀದಿ ಸುತ್ತಬೇಕು, ಕಂಡ ಕಂಡವರಲ್ಲಿ ರೆಫೆರೆನ್ಚೆಗಾಗಿ  ಗೊಗರಿಬೇಕು, ಕೆಲಸ ಹುಡ್ಕೋ ನೆಪದಲ್ಲಿ ಇರೋ ಅಷ್ಟು ಇಷ್ಟು ಹಣ ಹಾಳು ಮಾಡಬೇಕು, ಹುಡ್ಕಿ ಹುಡ್ಕಿ ಸಾಕಾದ್ ಮೇಲೆ ಸ್ವಲ್ಪ ಬೇಜಾರಗ್ಬೇಕು... ಇದೆಲ್ಲ ಅದಮೇಲೆ ಕೆಲಸ ಸಿಗುತ್ತಾ ಅಂತ ಕೇಳ್ತಿರ?.......... ಇಲ್ಲ ರೀ ...........ಆದ್ರೆ
 luckily ಸಿಕ್ರು  ಸಿಗಬಹುದು....ನಿಜವಾದ ಜೀವನ ಅಂದ್ರೆ ಏನು ಅಂತ ಗೊತ್ತಾಗೋದೇ ಈ  ಸಮಯದಲ್ಲಿ.ಒಂದೊಂದಸಲ ಯಾಕಾದ್ರು ಹುತ್ತಿದ್ವಪ್ಪ ಅನ್ನೋ ಅಷ್ಟು ಬೇಜಾರು ಆಗುತ್ತೆ .ಏನು ಮಾಡೋಕ್ಕಾಗಲ್ಲ ಏಕೆಂದರೆ ಜೀವನ ಅನ್ನೋದೇ ಹೀಗೆ ಅಲ್ವೇನ್ರಿ ....
ಬೆಂಗಳುರಿನಲ್ಲಿರೋ ದೊಡ್ಡ ದೊಡ್ಡ IT ಕಂಪನಿಗಳು  ನಮ್ಮಂತೆ ಕೆಲಸ ಹುದುಕ್ತಿರೋ ಎಷ್ಟೋ engineers ಗಳನ್ನ ಕೈ ಬೀಸಿ ಕರಿತ ಇವೆ....
ಇಲ್ಲಿ ಇನ್ನೊಂದು ಕಾಮಿಡಿ ಅಂದ್ರೆ ನಾವೆಲ್ಲ ಕಲಿಯೋದೇ ಒಂದು ಆಮೇಲೆ ಕೆಲಸ ಮಾಡೋದೇ ಒಂದು..ಇದು ವಿಚಿತ್ರ ಆದರು ಸತ್ಯ ಕಣ್ರೀ ...EC ,EE , even Mech ಮಾಡ್ದೊನಿಗು ಸಾಫ್ಟ್ವೇರ್ ಕೆಲ್ಸನೆ ಬೇಕು..ಎಂಥ ಕಾಮಿಡಿ ಅಲ್ವಾ. Mechanical ಕಲ್ತಿರೋವ್ನ್ಗು , ಸೋಫ್ತ್ವರೆಗೂ ಎಲ್ಲಿಂದ ಎಲ್ಗೆ ಸಂಬಂದ ಹೇಳಿ.... 4 ವರ್ಷ ,ಇಷ್ಟ ಪಟ್ಟು....ಅಲ್ಲ ಅಲ್ಲ ತುಂಬಾನೇ ಕಷ್ಟ ಪಟ್ಟು ಓದಿರೋ ಅವನ ವಿದ್ಯೆ ಎಲ್ಲಿ use ಆಯಿತು ಹೇಳಿ ....ನೀರಿನಲ್ಲಿ ಹುಣಸೆ ಹಣ್ಣು ತೊಳೆದಿರೋ ಹಾಗೆ ಆಗ್ಲಿಲ್ವಾ .........ಸ್ವಲ್ಪ ಯೋಚನೆ ಮಾಡಿ ನೋಡಿ.. ..
ಈವಾಗ IT ಕಂಪನಿಲಿ ಕೆಲಸ ಮಾಡ್ತಾ ಇರೋರೆಲ್ಲ ಸಾಫ್ಟ್ವೇರ್ engineersgu, ನಾನ್ ಇಲ್ಲಿವರ್ಗು ಹೇಳಿರೋ ಒಂದೊಂದ್ ಮಾತು ನಿಜ ಅಂತನೆ ಅನ್ಸತ್ತೆ ....ಯಾಕೆಂದರೆ ಎಲ್ಲರಿಗು ಇದರ ಅನುಭವ ಆಗೆ ಇರುತ್ತೆ.....ಅದೇನೋ ಅಂತಾರಲ್ಲ.......... hardware
engineers ಗಳ ಚಿತ್ತ.... forcibly.... software ನತ್ತ... ಅನ್ನೋ ಹಾಗೆ.
ಹಾಗಾದ್ರೆ ಏನು ಮಾಡಬೇಕು ಅಂತ ಕೇಳ್ತಿರ?......ನಿಜ ಹೇಳ್ತೀನಿ ಅದು ನಂಗು ಇಲ್ಲಿ ತನಕ ಚಿದಂಬರ ರಹಸ್ಯ ಆಗೆ ಉಳಿದಿದೆ...ಇದರ ಉತ್ತರ ನನಗೂ ಗೊತ್ತಿಲ್ಲ... ನಿಮಗೆ ಯಾರಿಗದ್ರು ಗೊತ್ತಾದ್ರೆ ನಂಗು ಹೇಳಿ ;)...ಕಾಯ್ತಾ ಇರ್ತೀನಿ......... ಹಾಂ................ ಇನ್ನೊಂದ್ ಮಾತು...........
ಈ ಸಣ್ಣ ಹರಟೆ ಯಾರಗೂ ನೋವ್ಗ್ಬೇಕು ಅಂತ ಬರ್ದಿಲ್ಲ ...ಹಾಗೆ ಸುಮ್ನೆ ಬರಿತ ಹೋಗಿರೋದು..ನಿಮಗಿಷ್ಟ ಆಗಿ ಎಂಜಾಯ್ ಮಾಡಿದ್ರೆ ಸಾಕು..ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ದಯವಿಟ್ಟು ತಿಳಿಸಿ......i ll back :-p

9 ಕಾಮೆಂಟ್‌ಗಳು:

  1. ನನ್ಗೂ ಅಸ್ಟೆ ..ನಮ್ engineers ಲೈಫ್ ಹೀಗೆ ಇದೆ ಅನ್ಸುತ್ತೆ ..!

    ಪ್ರತ್ಯುತ್ತರಅಳಿಸಿ

Related Posts Plugin for WordPress, Blogger...