ನಿನ್ನ ಪ್ರೀತಿಯ ನದಿಗೆ
ನಾನಾಗುವೆ ಕಡಲು ,
ನಿನ್ನ ಮಧುರವಾದ ಸ್ನೇಹಕ್ಕೆ
ನಾನಾಗುವೆ ತಡೆ ಇಲ್ಲದ ಮುಗಿಲು ,
ನಿನ್ನ ಹೃದಯದ ನೋವಿಗೆ
ನಾ ತುಂಬುವೆ ಸಂತಸದ ಹೊನಲು ,
ನಿನ್ನ ಮನಸಿನ ಮೌನದ ಮಾತಿಗೆ
ನಾನಾಗುವೆ ಸವಿನುಡಿಯು.
ನಿನ್ನ ಮನಸಿನ ಭಾವಗಳನ್ನು
ನಾ ಮಾಡುವೆ ನನಸು ,
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ
ನಿನ್ನ ಬಾಳಿನ ಬಿರುಕತ್ತಲೆಗೆ
ನಾನಾಗುವೆ ಬೆಳಕು ,
ನಿನ್ನ ಹೂವಿನಂತಹ ಮನಸಿಗೆ
ನೋವಾಗದಂತೆ ಕಾಯುವೆ ಹಗಲಿರುಳು.
ಇಷ್ಟು ಸಾಕಲ್ಲವೇ ಗೆಳತಿ
ನಿನ್ನ ಸಂತೋಷವಾಗಿಡಲು,
ಸಿರಿ ನೀಡಲು ಆಗದಿದ್ದರು
ಉಸಿರಿರುವ ತನಕ ನಾ ನೀಡುವೆ ನನ್ನಲ್ಲಿರುವ ಒಲವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ