ನಿನ್ನ ಪ್ರೀತಿಯ ನದಿಗೆ
ನಾನಾಗುವೆ ಕಡಲು ,
ನಿನ್ನ ಮಧುರವಾದ ಸ್ನೇಹಕ್ಕೆ
ನಾನಾಗುವೆ ತಡೆ ಇಲ್ಲದ ಮುಗಿಲು ,
ನಿನ್ನ ಹೃದಯದ ನೋವಿಗೆ
ನಾ ತುಂಬುವೆ ಸಂತಸದ ಹೊನಲು ,
ನಿನ್ನ ಮನಸಿನ ಮೌನದ ಮಾತಿಗೆ
ನಾನಾಗುವೆ ಸವಿನುಡಿಯು.
ನಿನ್ನ ಮನಸಿನ ಭಾವಗಳನ್ನು
ನಾ ಮಾಡುವೆ ನನಸು ,
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ
ನಾನಾಗುವೆ ನೆರಳು .