my poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
my poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜುಲೈ 2, 2012

ನಿನ್ನದೇ ಬಿಂಬ

ತಿರುಗಿ ಹೋಗುವ ಮುನ್ನ ನನ್ನ ಕಣ್ಣನ್ನು ಒಮ್ಮೆ ನೋಡು
ನನ್ನ ನಯನದಲ್ಲೇ ಕಾಣುವೆ ನಿನ್ನ ನಾ ನೋಡುವ ತವಕ
ಕನಸಂತೆ ನನ್ನ ಬಾಳಲ್ಲಿ ಬಂದವಳು ನೀನು
ಈ ಕನಸ ನನಸ ಮಾಡದೇ ಹೋಗಬೇಕೆನ್ದಿರುವವಳು ನೀನು  :)

ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ನೀನೆ ಆಗಿರುವೆ
ನೀ ಬಂದೆ ಬರುವೆ ಎಂದು ನೂರಾರು ಕನಸ ಕಟ್ಟಿರುವೆ
ಈ ನನ್ನ ಕನಸಿನ ಕೋಟೆಯಲ್ಲೂ ನೀನೆ ಕಾಣುತ್ತಿರುವೆ
ನಿನ್ನ  ಕಾಯುವುದರಲ್ಲೂ ಅದೇನೋ ಸುಖವಿದೆ :)

ನನ್ನ ಬದುಕಿನ ಕನ್ನಡಿಯಲಿ ನಿನ್ನದೇ ಬಿಂಬವಿದೆ ,

ದಯವಿಟ್ಟು ಒಡೆಯದೆ ಹೋಗದಿರು ಈ ನನ್ನ ಒಲವನ್ನ
ಮಿಡಿಯುತಿದೆ ನನ್ನ ಹೃದಯ ನಿನ್ನ ಒಂದು ಆ ಕಣ್ ಸನ್ನೆಗೆ
ನೀ ನನ್ನ ಬಾಳಲ್ಲಿ ಬಂದರು ಬರದೆ ಇದ್ದರು, ಸುಖವಾಗಿರು
ನಿನೆಲ್ಲೇ ಇದ್ದರು, ಇದೊಂದೇ ಪ್ರಾರ್ಥನೆ ಆ ನನ್ನ  ದೇವರಿಗೆ :)
Related Posts Plugin for WordPress, Blogger...