ಸೋಮವಾರ, ಜುಲೈ 2, 2012

ನನ್ನ ಮನದಾಳದ ಚಿತ್ಕಾರ


ನನ್ನ ಮನಸಿನ ನೂರಾರು ಆಸೆಗಳಿಗೆ
ರೆಕ್ಕೆ ತಂದವಳು ನೀನು ♥
ನನ್ನ ಕನಸಿನ ಕೋಟೆಯ ಬಾಗಿಲ ತೆರೆದು
ಪೀರ್ತಿಯ ಸ್ಪರ್ಶ ನೀಡಿದವಳು ನೀನು ♥
ನನ್ನ ಸಾಗರದಂತಹ ಹೃದಯಕ್ಕೆ ಸ್ನೇಹದ 
ಸೆಳೆತ ತಂದವಳು ನೀನು .♥
ನಿನ್ನ ಈ ಮೌನವ ಸಹಿಸಿಯೂ ಪ್ರೀತಿಯ ಅರಸುತ್ತ
ಬದುಕ ಸಾಗಿಸುವ ಅಲೆಮಾರಿ ನಾನು ♥

ನನ್ನ ಕಣ್ಣಿನಲ್ಲಿ ಒಮ್ಮೆ ನೋಡು ಬಾ ಗೆಳತಿ
ನಿನ್ನ ಪ್ರೀತಿ ಮಾಡುತ್ತಿರುವ ರೀತಿಯ
ನೀ ನೋಡಿದರು ನೋಡಲಾಗದಿರುವ
ಅದೆಷ್ಟೋ ನನ್ನ ಮನಸಿನ ಭಾವನೆಯ ♥
ನನ್ನ ಮನಸಿನ್ನಲ್ಲಿ ಆಗುತ್ತಿರುವ ತಳಮಳವೆಲ್ಲ
ಕನಸೋ ಕಲ್ಪನೆಯೂ ನಾ ಅರಿಯೆ ♥
ಇದೆಲ್ಲ ಏನೇ ಇದ್ದರು ನಾ ನಾಗಬೇಕೆನ್ದಿರುವೆ
ನಿನ್ನೊಲವಿಗೆ ಒಡೆಯ ♥

ಕಣ್ಣಿನ ಹನಿಯಲ್ಲಿ ಹೊರ ಹಾಕಲು
ಸಾಧ್ಯವೇ ಹೃದಯದ ನೋವೆಲ್ಲ♥
ನನ್ನ ಮೊಗವ ನೀನೋಮ್ಮೆ ನೋಡು 
ಅರಿಯುವೆ ನೀ ನನ್ನ ಮನದಾಳದ ಚಿತ್ಕಾರವನ್ನ 
ನಿನ್ನ ಸನಿಹ ಇದ್ದರೆ ನಾ ಕಾಣುವೆ 
ಪ್ರೀತಿಯ ಅರ್ಥವನ್ನೆಲ್ಲ
ನಿನ್ನ ಪ್ರೀತಿಯ ಮಧುರ ಅಲೆಗಳಲ್ಲೇ
ಅಡಗಿದೆ ನನ್ನ ಮೌನದ ಮಾತೆಲ್ಲ♥

ನಿನ್ನದೇ ಬಿಂಬ

ತಿರುಗಿ ಹೋಗುವ ಮುನ್ನ ನನ್ನ ಕಣ್ಣನ್ನು ಒಮ್ಮೆ ನೋಡು
ನನ್ನ ನಯನದಲ್ಲೇ ಕಾಣುವೆ ನಿನ್ನ ನಾ ನೋಡುವ ತವಕ
ಕನಸಂತೆ ನನ್ನ ಬಾಳಲ್ಲಿ ಬಂದವಳು ನೀನು
ಈ ಕನಸ ನನಸ ಮಾಡದೇ ಹೋಗಬೇಕೆನ್ದಿರುವವಳು ನೀನು  :)

ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ನೀನೆ ಆಗಿರುವೆ
ನೀ ಬಂದೆ ಬರುವೆ ಎಂದು ನೂರಾರು ಕನಸ ಕಟ್ಟಿರುವೆ
ಈ ನನ್ನ ಕನಸಿನ ಕೋಟೆಯಲ್ಲೂ ನೀನೆ ಕಾಣುತ್ತಿರುವೆ
ನಿನ್ನ  ಕಾಯುವುದರಲ್ಲೂ ಅದೇನೋ ಸುಖವಿದೆ :)

ನನ್ನ ಬದುಕಿನ ಕನ್ನಡಿಯಲಿ ನಿನ್ನದೇ ಬಿಂಬವಿದೆ ,

ದಯವಿಟ್ಟು ಒಡೆಯದೆ ಹೋಗದಿರು ಈ ನನ್ನ ಒಲವನ್ನ
ಮಿಡಿಯುತಿದೆ ನನ್ನ ಹೃದಯ ನಿನ್ನ ಒಂದು ಆ ಕಣ್ ಸನ್ನೆಗೆ
ನೀ ನನ್ನ ಬಾಳಲ್ಲಿ ಬಂದರು ಬರದೆ ಇದ್ದರು, ಸುಖವಾಗಿರು
ನಿನೆಲ್ಲೇ ಇದ್ದರು, ಇದೊಂದೇ ಪ್ರಾರ್ಥನೆ ಆ ನನ್ನ  ದೇವರಿಗೆ :)

ಶುಕ್ರವಾರ, ಜೂನ್ 15, 2012

ಒಲವಿನ ಬೇಗೆ

ನುಡಿಯುತಿದೆ ನಿನ್ನ ಪ್ರೀತಿಯ ಘಂಟೆ
ನನ್ನ ಹೃದಯದ ಮಂಟಪದಲಿ,
ಹೊಸದೇನೋ ಕೇಳಬಯಸಿದೆ ನನ್ನ ಮನಸ್ಸು
ನಿನ್ನ ನೋಡಿದ ಘಳಿಗೆಯಲಿ .

ನಿನ್ನ ನೋಡಿದ ಕ್ಷಣದಿಂದ
ಪ್ರತಿಯೊಂದು ಹೊಸದೆನಿಸಿದೆ ,
ಈ ನನ್ನ ಮನಸಿನ ಪುಟದಲಿ
ನಿನ್ನ ಹೆಸರೇ ಬರೆಯಬೇಕೆನಿಸಿದೆ

ನನ್ನ ಒಲವಿನ ಉಡುಗರೆಯು
ನಿನ್ನ ಒಪ್ಪಿಗೆಯನ್ನು ಕಾಯುತ್ತಿದೆ ,
ನಿನ್ನ ಪ್ರೀತಿಯ ಹಣತೆ
ಹಚ್ಚಬಾರದೆ ಗೆಳತಿ ನನ್ನ ಎದೆಯಲಿ .

ಮಿಡಿಯುತಿದೆ ನನ್ನ ಮನಸ್ಸು
ನಿನ್ನ ಪ್ರೀತಿಯ ಅಪ್ಪುಗೆಗೆ ,
ನೀನೆಂದು ನೀಡುವೆ ತಂಪು
ನಿನ್ನಿಂದ ಆದ ಈ ಒಲವಿನ ಬೇಗೆಗೆ .

ಬುಧವಾರ, ಮೇ 23, 2012

My poem

ನಿನ್ನ ಪ್ರೀತಿಯ ನದಿಗೆ
ನಾನಾಗುವೆ ಕಡಲು ,
ನಿನ್ನ ಮಧುರವಾದ ಸ್ನೇಹಕ್ಕೆ
ನಾನಾಗುವೆ ತಡೆ ಇಲ್ಲದ ಮುಗಿಲು ,

ನಿನ್ನ ಹೃದಯದ ನೋವಿಗೆ
ನಾ ತುಂಬುವೆ ಸಂತಸದ ಹೊನಲು , 
ನಿನ್ನ ಮನಸಿನ ಮೌನದ ಮಾತಿಗೆ 
ನಾನಾಗುವೆ ಸವಿನುಡಿಯು.

ನಿನ್ನ ಮನಸಿನ ಭಾವಗಳನ್ನು 
ನಾ ಮಾಡುವೆ ನನಸು ,
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ 
ನಾನಾಗುವೆ ನೆರಳು .

ಸೋಮವಾರ, ಮಾರ್ಚ್ 5, 2012

ಎಚ್ಚರ

ಮನದ ಹಿಂದಿರುವ ಮಾತನ್ನು ನೀ ಹೇಗೆ ತಿಳಿಯುವೆ ,
ನಗೆಯ ಹಿಂದಿನ ಅಳುವನ್ನು ನೀ ಹೇಗೆ ಅರಿಯುವೆ ,
ನನ್ನೆದೆಯ ಒಳಗಿನ ತಳಮಳ ನೀ ಹೇಗೆ ಸವಿಯುವೆ ,
ಈ ತರದ ವೇದನೆಯ ಉಣಿಸಬೇಡ ನನ್ನೆದೆಯಲ್ಲಿ ,
ನನ್ನಿರುವೆಕೆಯೇ ನಿನಗೆ ಭಾರವಾದಿತು ಎಚ್ಚರ !

ಕರಿಮುಗಿಲಂತೆ ನೋವುಗಳೇ ನನ್ನೆದೆಯಲಿ ಅಡಗಿರುವುದು,
ಮಳೆಯೆಂಬ ಅಳು ಬರದೇ ಮನಸ್ಸು ತುಂಬಾ ಭಾರವಾಗಿದೆ ,
ನನ್ನೆದೆಯ ನೋವಿನ ಕೊಳವು ಎಂದೋ ತುಂಬಾಗಿದೆ,
ಸಣ್ಣ ಹೂ ಎಸೆದರು ನೋವು ತುಳುಕಿತು ಎಚ್ಚರ !

ಕನಸಿನ ತೆರೆಯನ್ನು ಸರಿಸಿ ,ವಾಸ್ತವ ಸ್ಥಿತಿಯ ನೀನೊಮ್ಮೆ ನೋಡು ,
ನಿನಗಾಗಿ ನಾನಿಂದು ಕಂಬನಿಯ ಮಿಡಿಯುತ್ತಿರುವೆ ,
ನನ್ನ ನೋವಿನ ಹಿಂದಿನ ಕಥೆಯ ತಿಳಿಯದೆ ನೀ ಸುಖವಾಗಿರು ,
ನನ್ನ ನೋವು ತಿಳಿಯಲು ಹೋಗಿ ನಿನ್ನ ನೋವೆ ಹೆಚ್ಚಾದಿತು ಎಚ್ಚರ !

ಬುಧವಾರ, ಜನವರಿ 25, 2012

ಗೆಳತಿ


ಮನಸ್ಸೆಂಬ ಕತ್ತಲೆಯ ನಭದಲಿ  
ಚಂದ್ರನಂತೆ ಬಂದು ನಿಂತೆ ನೀನು, 
ಮೋಡದಂತಹ ಪ್ರೀತಿಯನ್ನು ಕರಗಿಸಿ 
ಮಳೆಹನಿಯಾಗಿ ಸುರಿದೆ ನನ್ನ ಬಾಳಲಿ ನೀನು, 
ಸೋಲೆಂಬ ನನ್ನ ಬಾಳಿನ ಬಳ್ಳಿಗೆ 
ಆಸರೆಯ ಮರವಾದೆ ನೀನು, 
ಕಷ್ಟಗಳೆ ತುಂಬಿದ ನನ್ನ ಬಾಳೆಂಬ ದುಂಬಿಗೆ 
ಸಿಹಿಯಾದ ಮಧು ಕೊಡುವ ಹೂವದೆ ನೀನು , 

ಶುಕ್ರವಾರ, ಡಿಸೆಂಬರ್ 30, 2011

Worth spending some time to read this...

Friends I Just got this article as a fwd mail.Really touching story .:( So posted here.Must read it.


ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.

ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ
? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ 11ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!

ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ
, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : `ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ...'

ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು :
`ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ...

ಶನಿವಾರ, ಡಿಸೆಂಬರ್ 24, 2011

ಗೆಳೆತನ


ಮೊದಮೊದಲು ಕೇಳಿದ ಆ ದ್ವನಿಯು ಮೀಟೀತು ನನ್ನೆದೆಯಲಿ ,
ಸಹಜವಾಗೇ ಸ್ಪಂದಿಸಿತು ನನ್ನೀ ಮನಸ್ಸು ನಿನ್ನೆಡೆಯಲಿ,
ಮತ್ತೆ ಮತ್ತೆ ಕೇಳಬೇಕೆನಿಸಿತು ನಿನ್ನ ಮಾತಿನ ದಾಟಿಯನ್ನು,
ಎಬ್ಬಿಸಿತು ನನ್ನಲೊಂದು ಆಶಾಕಿರಣದ ಅಲೆಯನ್ನು.

ನೀ ಮಾತನಾಡಿದರೆ ಸಾಕೆಂಬ ಭಾವ ಮೂಡಿತು ಮನದಲಿ,
ನೋಡ ನೋಡುತ್ತಲೇ ಕಳೆದೋದೆ ನಿನ್ನ ಗೆಳೆತನದ ಬೆಸುಗೆಯಲಿ ,
ಮಾತು ಬೆಳ್ಳಿ ಮೌನ ಬಂಗಾರವಾಯ್ತು ನನ್ನ ಮಾತು ನಿನ್ನೆದುರಲಿ ,
ಆಧ್ಯೆಗೆ ಬಂಧಿಸಿರುವೆ ನನ್ನ ನೀ ,ನಿನ್ನ ಮಧುರವಾದ ಮಾತಿನಲಿ .

ಮಂಗಳವಾರ, ಡಿಸೆಂಬರ್ 20, 2011

ಕನಸಿನ ಚೆಲುವೆ


ಸಿಹಿಯಾಗಿದೆ ನಿನ್ನ ನೆನಪು ಯಾವಾಗಲು,
ಅನುದಿನವು ಕಾಣುತ್ತಿರುವೆನು ನೀ ಬರುವ ದಾರಿಯನ್ನು,
ಹೇಗೆ ಹೇಳಿಕೊಳ್ಳಲಿ ನನ್ನ ಮನದ ತಳಮಳವನ್ನು,
ಕನಸಲ್ಲು ಕಾಣುತ್ತಿರುವೆ ನಾ ನಿನ್ನ ಮೊಗವನ್ನು.

ಬೇಕೆನಿಸಿದೆ ನನಗೆ ನೀನು ಪ್ರತಿ ಅಣು ಅಣುವು,
ಹೃದಯವೂ ಯಾವಾಗಲು ಬಯಸಿದೆ ನಿನ್ನ ಸನಿಹವನ್ನು,
ನಿನ್ನ ಒಲವನ್ನೇ ಕಾಣುತ್ತಿರುವೆ ಪ್ರತಿ ಕ್ಷಣವೂ,
ಇದೇಕೆ ಹೀಗೆ ಕಾಡುತ್ತಿರುವೆ ನನ್ನ ನೀನು.

ಗುರುವಾರ, ಡಿಸೆಂಬರ್ 15, 2011

ಬಾಲ್ಯದ ನೆನಪು

ಅಮ್ಮ ನಿನ್ನ ಮಡಿಲಲ್ಲಿ ಮತ್ತೊಮ್ಮೆ ಮಗುವಾಗುವಾಸೆ,
ಸಾಕಾಗಿದೆ ಈ ಜಂಜಾಟದ ಬದುಕು ಮತ್ತೊಮ್ಮೆ ನನ್ನ
ಬಾಲ್ಯಕ್ಕೆ ಮರಳುವಾಸೆ,
ನಿಷ್ಕಲ್ಮಶಾವಾದ ಆ ವಯಸ್ಸು,ಯಾರಿಗೂ ನೋಯಿಸದ ಆ ಮನಸ್ಸು
ಮತ್ತೊಮ್ಮೆ ಪಡೆಯುವಾಸೆ
ಮಣ್ಣಿನಲ್ಲಾಡುತ್ತಿದ್ದ ದಿನಗಳು,ಸಮಯಕ್ಕೆ ಬೆಲೆಯೇ ಇಲ್ಲದ
ಆ ಕ್ಷಣಗಳಿಗೆ ಮತ್ತೊಮ್ಮೆ ಹೋಗುವಾಸೆ ,
ನಾಳೆಯ ಚಿಂತೆಯೇ ಇಲ್ಲದೇ,ನಿನ್ನೆಯ ಕೊರಗಿಲ್ಲದೇ ನಲಿಯುತ್ತಿದ್ದ
ದಿನಗಳಿಗೆ ಮತ್ತೊಮ್ಮೆ ಜಿಗಿಯುವಾಸೆ,

ಬುಧವಾರ, ಡಿಸೆಂಬರ್ 14, 2011

ಸರ್ವಜ್ಞನ ವಚನಗಳು


ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ – ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ

ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು – ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ

ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು – ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ

ಸರ್ವಜ್ಞನ ವಚನಗಳು

ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ – ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ
...
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ – ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ

ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು – ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

ಸೋಮವಾರ, ಡಿಸೆಂಬರ್ 12, 2011

ಚಂದ್ರ ಗ್ರಹಣ (Lunar eclipse)

ಮೊನ್ನೆ ಅಂದ್ರೆ (೧೦-೧೨-೨೦೨೨) ಜಗತ್ತಿನಾದ್ಯಂತ ಚಂದ್ರ ಗ್ರಹಣ ಇತ್ತು . ಇದನ್ನ ಸಾವಿರಾರು ಜನ ನೋಡಿ ಕಣ್ಣ ತುಮ್ಬಿಸ್ಕೊಂದ್ರು ಸಹ .ಇದರಲ್ಲಿ ನಾನು ಒಬ್ಬ ಮತ್ತು ನನ್ನ  ಕೆಲವು ಸ್ನೇಹಿತರು ಸಹ .ನಾನು ಏನ್ ಬರಿಲಿ ಅಂತ ಯೋಚನೆ ಮಾಡ್ತಾ ಇದ್ದೆ ಅವಾಗ ಈ ಟಾಪಿಕ್ ಸಿಕ್ತು ಹಾಗೆ ಬರ್ದಿದೀನಿ just enjoy it :)

ಹಾಗಾದ್ರೆ ಚಂದ್ರ ಗ್ರಹಣ ಅಂದ್ರೆ ಏನು ?ನಾನು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಕೊಡ್ತೀನಿ. ಚಂದ್ರ ಗ್ರಹಣ ಅಂದ್ರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿಳದಂತೆ ಭೂಮಿ ತಡೆಯುತ್ತೆ ಆ ಸಂಧರ್ಬದಲ್ಲಿ ಚಂದ್ರನ ಮೆಲ್ಮಾಯಲ್ಲ ಸ್ವಲ್ಪ ಕಪ್ಪದಂತೆ ಕಾಣುತ್ತೆ . It occurs only when sun ,earth,moon aligned exactly .ಅದು ಕೂಡ ಹುಣ್ಣಿಮೆಯ ದಿನ ಇದು ನಡೆಯುತ್ತೆ .

ಶನಿವಾರ, ಡಿಸೆಂಬರ್ 10, 2011

ಮನಸಿನ ಮಾತು

ಇಳೆಯ ಮೇಲೆ ಪ್ರೀತಿಯ ಮಳೆಯ ಚುಂಬನ ,
ಹೂವಿನ ಮೇಲೆ ಮಂಜಿನ ಹನಿಗಳ ಸಿಂಚನ,
ತರುಗಳ ಮೇಲೆ ಲತೆ ಬಳ್ಳಿಗಳ ಬಂಧನ ,
ನನ್ನ ಮನಸಿನೊಳಗೆ ನಿನ್ನ ಒಲವಿನ ಸಂಚಲನ .

ನದಿ ತೊರೆಗಳಿಗೆ ಸಾಗರ ಸೇರುವ ಬಯಕೆ ,
ಹೂ-ದುಂಬಿಗಳಿಗೆ ನೇಸರನ ನೋಡುವ ಬಯಕೆ ,
ದಿನ ಬೆಳಗ್ಗೆ ಭಾಸ್ಕರನಿಗೆ ಭೂರಮೆಯ ನೋಡುವ ಬಯಕೆ ,
ನನಗೆ ನಿನ್ನ ಒಲವ ಪಡೆವ ಬಯಕೆ .

ಶುಕ್ರವಾರ, ಡಿಸೆಂಬರ್ 9, 2011

What is life(ಜೀವನ ಅಂದ್ರೆ ಏನು )

ಜೀವನ ಅಂದ್ರೆ ಏನು ? ಮೂರು ಅಕ್ಷರದಿಂದ ಕೂಡಿದ ಒಂದು ಪದ ಮಾತ್ರ ನಾ...ಅಲ್ಲ .... ನಿಜ ಹೇಳ್ಬೇಕು ಅಂದ್ರೆ ಜೀವನ ಅಂದ್ರೆ ಏನು ಅಂತ ನನಗೂ ಇನ್ನು
ಗೊತ್ತಿಲ್ಲ ಅದೇನೋ ಹೇಳ್ತಾರಲ್ಲ 'Life is like a ocean ,  no one knows where they ll reach at the end' ಎಷ್ಟು ನಿಜ ಅಲ್ವಾ..... ಅವರವರ ಮನದಂತೆ ಅವರವರ ಕಲ್ಪನೆ.
ಜೀವನ ಅಂದ್ರೆ ಏನು ಅಂತ ಗೊತ್ತಾಗಿದ್ದೆ ಬೆಂಗಳೂರಿಗೆ ಕಾಲಿಟ್ಟ ಮೇಲೆ. ನಾನು ಬೆಂಗಳೂರಿಗೆ ಕಾಲಿಟ್ಟ ಘಳಿಗೆನೆ ಚೆನ್ನಾಗಿರಲಿಲ್ಲ ಕಣ್ರೀ.ಏಕೆಂದರೆ software ಅನ್ನೋ ದೇವತೆ ಫುಲ್ ಮುನಿಸಿಕೊಂಡು ಬಿಟ್ಟಿದ್ಲು ಕಣ್ರೀ . ಅದ್ರು ನಾನ್ ಬಿಡ್ತೀನಾ... ಆಗಿನ ನನ್ನ ಉತ್ಸಾಹ ಹೇಗೆ ಹೇಳಲಿ ನಿಮಗೆ. ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತುಕೊಂಡು ಸಿಲಿಕಾನ್ ಸಿಟಿಗೆ ಕನಸನ್ನು ನನಸು ಮಾಡೋ ಆಸೆ ಇಂದ ಬಂದಿದ್ದೆ .
ಕೆಲಸ ಹುಡಕಬೇಕು, ಹಣ ಸಂಪಾದಿಸಬೇಕು ಅನ್ನೋ ಉತ್ಸಾಹ ಎಲ್ಲರಲ್ಲೂ ಸಹಜನೆ....ಅದು ನನ್ನಲ್ಲೂ ಇತ್ತು...ಆದ್ರೆ ನನ್ನ ಪ್ರಶ್ನೆ ಏನು ಅಂದ್ರೆ... B.E ಮುಗಿದ ಮೇಲೆ ಕೆಲಸ ಸಿಕ್ ಬಿಡುತ್ತ? ಬೆಂಗಳೂರಿನಲ್ಲಿ ಕೆಲಸ ಸಿಗೋದು ಅಂದ್ರೆ ಬಾಳೆ ಹಣ್ಣು ಸಿಪ್ಪೆ ತೆಗೆದು ತಿಂದಷ್ಟು ಸುಲಭ ಅಂದ್ಕೊಂಡ್ರ?

ಬುಧವಾರ, ಡಿಸೆಂಬರ್ 7, 2011

IT lifuuuu.....Ishtenaaa......

hmmm ಏನು ಮಾಡಲಿ , ಏನು ಬರಿಲಿ ಅಂತ ಯೋಚನೆ ಮಾಡ್ತಾ ಇರ್ಬೇಕಾದ್ರೆ ನನ್ನ ಮನಸ್ಸಿಗೆ ತೋಚಿದನ್ನ ಸುಮ್ಮನೆ ಬರಿತ ಹೋಗಿದೀನಿ .Hope you like.:)

IT ಇದು ನನ್ನ ಎರಡು ವರ್ಷದ ಅನುಭವದ ಪ್ರಕಾರ ಒಂದು ದೊಡ್ಡ ಸಮುದ್ರ ಇದ್ದ ಹಾಗೇ. ಎಷ್ಟೇ ಈಜಿದರು ದಡ ಸೇರೋಲ್ಲ ಅಂತಾರಲ್ಲ ಹಾಗೇ . ಆದರೆ ಇದರಲ್ಲೂ ಈಜಿ ಸಾಧನೆ ಮಾಡಿರೋರು ತುಂಬಾ ಜನಾನೇ ಇದಾರೆ .ಸಮುದ್ರ ಏಕೆ ಅಂದ್ರೆ ನಾನಿಲ್ಲಿ ಹಲವಾರು ಹೊಸ ವಿಷಯಗಳನ್ನ ಕಲಿತ ಇದೀನಿ .ಆದ್ರೆ ನಾನು ಹಿಂತುರುಗಿ ನೋಡಿದರೆ ಅದೆಲ್ಲ ಹಳೆಯದಾಗಿ ಏನು ಕಲ್ತೆ ಇಲ್ಲ ಅನ್ಸುತ್ತೆ. ಇದು ನನ್ನ ಅನುಭವ .ಬೇರೆಯವರು ಹೇಗೋ ನಂಗೊತ್ತಿಲ್ಲ .

ಹೆಣ್ಣಿವಳು

ಹೆಣ್ಣಿವಳು ಭುವಿಯಲ್ಲಿ ಒಂದು ಹೂವಿನಂತೆ..
ಸೂರ್ಯ ಇವಳ ತಂದೆ, ದುಂಬಿ ಇವಳ ಗಂಡನಂತೆ..
ಸೂರ್ಯನಿರದೆ ಇವಳು ಬದುಕುಲಿಯಲಾರಳು
ದುಂಬಿಯದು ಸ್ಪರ್ಶಿಸದೆ, ಇವಳು ನಗುತಿರಲಾರಳು
ನಗುತಿರೆ ಹು ಒಂದು, ನೋಡಲೆಷ್ಟು ಸುಂದರ...
ನಗುತಿರೆ ನೀ ಹೆಣ್ಣೇ, ಇ ಲೋಕವೇ ದೇವ ಮಂದಿರ.
ಹೆಣ್ಣು ಸಂಸಾರದ ಕಣ್ಣು ಎಷ್ಟೊಂದು ಸರಳ ,ಸುಂದರ .
           **ಸಚ್ಚಿ **

ಮುಂಜಾನೆ

ಶಶಿ ತಾರೆಯು ಸರಿದಿವೆ ಬಿಳಿ ಮೋಡದ ತೆರೆಗೆ ,
ರಾತ್ರಿ ಮತ್ತೆ ಬರುವೆನೆಂದು ಹೇಳಲೋರತ್ಹಿವೆ ನಮಗೆ ,
ನಿಶಾಚರಿಗಲೆಲ್ಲವು ಅಡಗುತ್ತಿವೆ ತಮ್ಮ ಬಿಲದ ಒಳಗೆ,
ಇದೆಲ್ಲ ಆಗುತ್ತಿರುವುದು ಮುಂಜಾನೆಯ ಸಣ್ಣ ಸುಳಿಗೆ.

ಆಕಾಶದಿ ಉದಯಿಸುತ್ತಿದೆ ಆ ಸುಂದರ ತಾರೆ ,
ಪುಷ್ಪ್ಪಗಳ ಸ್ಪರ್ಶಿಸಲು ಕಾಯುತ್ತಿವೆ ದುಂಬಿಗಳ ಸಾಲೆ ,
ಹಕ್ಕಿಗಳು ಹಾರುತ್ತಿವೆ ಗಿರಿ ತೊರೆಗಳ ಮೇಲೆ, 
 ಬಂನಿಸಲಗುವುದೇ ಆ ದೇವ ಮಾಡಿರುವ ಮುಂಜಾನೆಯ ಆ ಲೀಲೆ .
Related Posts Plugin for WordPress, Blogger...